ನಿನ್ನ ಹುಟ್ಟಲ್ಲ ಸಾವು ಕಾಡಬೇಕು
ಬದುಕುವುದಿದ್ದರೆ ನಿನ್ನ ಹುಟ್ಟಲ್ಲ ಸಾವು ಕಾಡಬೇಕು
ನಿನ್ನ ಮಝಾರದಲ್ಲಿ ಸದಾ ನೆನಪುಗಳ ಮೊಂಬತ್ತಿ ಉರಿಯುತ್ತಿರಬೇಕು, ಹಾಗೆ ಬದುಕು
ಬದುಕುವುದಿದ್ದರೆ ನಿನ್ನ ಚಿತ್ರವಲ್ಲ ಹೊತ್ತಗೆ ಉಳಿಯಬೇಕು
ನಗರದ ಗ್ರಂಥಾಲಯಗಳ ಬಾಗಿಲುಗಳು ಸದಾ ತೆರೆದಿರಬೇಕು, ಹಾಗೆ ಬದುಕು
ಬದುಕುವುದಿದ್ದರೆ ನಿನ್ನ ಮಾತುಗಳಲ್ಲ ಮೌನ ಕಾಡಬೇಕು
ನಿನ್ನ ಆಶಯಗಳು ಸದ್ದಿಲ್ಲದೆ ದೇಶದೆಲ್ಲೆಡೆ ಎದ್ದು ನಿಲ್ಲಬೇಕು, ಹಾಗೆ ಬದುಕು
ಬದುಕುವುದಿದ್ದರೆ ಭಕ್ತನಾಗಿಯಲ್ಲ ರಿಕ್ತನಾಗಿ ಬದುಕು
ನಿನ್ನ ಸಹನೆಯಲ್ಲಿ ದ್ವೇಷದ ಸದ್ದಡಗಿ ಹೋಗಬೇಕು, ಹಾಗೆ ಬದುಕು
ಬದುಕುವುದಿದ್ದರೆ ನಿನ್ನ ಸ್ವಾರ್ಥವಲ್ಲ ತ್ಯಾಗ ಕಾಡಬೇಕು
ಪ್ರೇಮ ಜ್ವಾಲೆಗೆ ಬಿದ್ದು 'ನಾನೆಂಬ' ಪತಂಗ ಸುಟ್ಟು ಭಸ್ಮವಾಗಬೇಕು, ಹಾಗೆ ಬದುಕು !
-- ಪುನೀತ್ ಅಪ್ಪು
Image info : Manto's tomb,


Comments
Post a Comment