ರೂಮಿಯಿಂದ ಕಬೀರನವರೆಗೆ ಹರಿದುಬಂದ ಸೂಫಿ ಶರಣ ಪರಂಪರೆ



'ಹರ್ ಲೆಹಝ್ ಬ ಶಕ್ಲಾನ್ ಬುತೇ  ಯಾರ್ ಬರಾ ಅಮದ್'

ಓ ನನ್ನ ಸೌಂದರ್ಯಪ್ರಿಯ ಗೆಳೆಯರೇ ಕೇಳಿ
ಸಂಭವಿಸಿದನವನು ಇಲ್ಲಿವಿವಿಧ ರೂಪದಲ್ಲಿ

ಎಲ್ಲರೆದೆಯ ತನ್ನತ್ತ ಸೆಳೆದು ತಾ ಮರೆಯಾಗಿಹನು ಇಲ್ಲಿ
ಪ್ರತಿಸಲವೂ ಅವತರಿಸಿದನವನುಬಹು ರೂಪಿಯಂತೆ

ವೃದ್ಧನಾಗಿಯೊಮ್ಮೆಯಾದರೆ ತುಂಬು ಜವ್ವನಿಗನಾಗಿ ಮತ್ತೆ

ಅವನೇ ಪಾತ್ರೆ , ಅವನೇ ಮಣ್ಣು ಕುಂಬಾರನೂ ಅವನೇ
ಮಧುವನ್ನು ತುಂಬಿಸಿದವನೂ ಅವನೇ ಮಧುಪಾತ್ರೆಯನ್ನು ಖರೀದಿಗೆಂದು ನೀಡಿದವನೂ ಅವನೇ

ಕೊನೆಯಲ್ಲಿ ಮಧುಪಾತ್ರೆಯನ್ನೇ ಪುಡಿಗೈದು
ಹೊರಟು ಹೋದವನೂ ಅವನೇ

ಯುಗ ಯುಗಗಳಲ್ಲಿ ಮತ್ತೆ ಮತ್ತೆ ತಾ ಅವತರಿಸಿಹನಲ್ಲ
ತಾ ಅರಬಿ ರೂಪದಲ್ಲಿ ಬಂದು ಜಗವನುದ್ಧರಿಸಿದಾಗ ಮಾತ್ರ ನಾನೇ ಸಾಕ್ಷಿಯಾದೆನಲ್ಲ !

ಮನ್ಸೂರನ ರೂಪದಲ್ಲಿ ಬಂದು ಅನಲ್ ಹಕ್ ಎಂದನಲ್ಲ
ಮನ್ಸೂರ ಸತ್ತನೆಂದ ಮೂರ್ಖರೇ ಸತ್ಯ ಮಾತ್ರ ಎಂದಿಗೂ ಇಲ್ಲಿ ಸಾಯಲಿಲ್ಲ !

ರೂಮಿ ಹೇಳುತಿಹನು ಕೇಳಿ ತಾ ಅವಿಶ್ವಾಸಿಯಲ್ಲದಿದ್ದರೂ
ಹಾಗೇಕೆ ಜನರು ಕರೆವರೋ !
ಅವಿಶ್ವಾಸಿಗಳು ಮಾತ್ರವೇ ಇದ ಒಪ್ಪದಿಹರು ಖಂಡಿತ
ಒಪ್ಪದವರೆಲ್ಲರೂ ನರಕಮುಖಿಯಾಗಲಿಹರಿದು  ನಿಶ್ಚಿತ !

-- ಮೌಲಾನಾ ಜಲಾಲುದ್ದೀನ್ ರೂಮಿ ರ
ಅನುವಾದ : ಪುನೀತ್ ಅಪ್ಪು

Comments