ಒಬ್ಬ ಕಥೆಗಾರನ ಹತ್ತಿರ ಆತನ ನಿರ್ದೇಶಕ ಮಿತ್ರ ಒಂದು ಚಿತ್ರಕಥೆ ಬರ್ಕೋಡೋ ಅಂತಾ ದಂಬಾಲು ಬೀಳುತ್ತಾನೆ. ಈ ಕಥೆಗಾರ ಆ ನಿರ್ದೇಶಕ ಇನ್ನು ಜೀವನದಲ್ಲೇ ಆತ ಕಥೆ ಕೇಳಬಾರದು ಅನ್ನುವಂತಹ ಪಾತ್ರಗಳನ್ನು ಚಿತ್ರಿಸಿ ಒಂದು ಕಥೆ ಬರೆದುಕೊಡುತ್ತಾನೆ. ಮಹಾಯುದ್ಧದ ಸಂದರ್ಭಕ್ಕೆ ಸಂಬಂಧಿಸಿದ ಚಿತ್ರವಾದ ಕಾರಣ ಅದರಲ್ಲಿ ಒಬ್ಬ ವೈಮಾನಿಕ ಅಧಿಕಾರಿ  ಯುದ್ಧ ತಂದೊಡ್ಡುವ ಭಯಾನಕ ಮಾನವ ವೇದನೆಯನ್ನು ಕಂಡು ಮಾನಸಿಕ ಸ್ಥೀಮಿತ ಕಳೆದುಕೊಂಡು  ರಣರಂಗದ ನಡುವೆ ವಿಮಾನ ಇಳಿಸಿ ಅಡ್ಡಾದಿಡ್ಡಿಯಾಗಿ ಗುಂಡು ಹಾರಿಸುತ್ತಾನೆ. ಇದು ಯುದ್ಧದ ನಿರರ್ಥಕತೆಯನ್ನು ಮತ್ತು ಅದು ಕೊನೆಯಲ್ಲಿ ತರುವ ಹತಾಷೆಯನ್ನು ಸೂಚಿಸುವ ದೃಶ್ಯ. 

     ಅಂತಹ ವಿಕ್ಷಿಪ್ತ ವೈಮಾನಿಕ ಅಧಿಕಾರಿಯ ಪಾತ್ರವನ್ನು ಮಾಡಲು ಸೂಕ್ತ ನಟರೇ ಸಿಗುವುದಿಲ್ಲ. ಚಿತ್ರಿಕರಣವೂ ಆರಂಭವಾಗಿದೆ. ಆದರೆ ಆ ಪಾತ್ರಕ್ಕೆ ನಟರೇ ಇಲ್ಲ ಕೊನೆಗೆ ನಿರ್ದೇಶಕ ಆ ಪಾತ್ರದ ಕಾಶ್ಟ್ಯೂಮನ್ನು ತಂದು ಆ ಕಥೆಗಾರನಿಗೇ ತೊಡಿಸಿ ಕ್ಯಾಮರಾದ ಮುಂದೆ ದೂಡಿ ಬಿಡುತ್ತಾನೆ. ಈ ದೃಶ್ಯದಲ್ಲಿ ಆ ಕಥೆಗಾರ ಏಕಕಾಲದಲ್ಲಿ ಗುಂಡಿನ ದಾಳಿ ಮತ್ತು ಕ್ಯಾಮೆರಾದ ದಾಳಿಯನ್ನು ಆಘಾತಗೊಂಡು ನೋಡುತ್ತಿರುವ ದೃಶ್ಯ. ನಟ /ಕಥೆಗಾರನನ್ನು ಗುರುತಿಸಿ

-- ಪುನೀತ್ ಅಪ್ಪು

Comments